ಸೋಮವಾರ, ಏಪ್ರಿಲ್ 13, 2020

ಕಾವವನು ಕಾಯುವನು
ಸಂಶಯವ ಕಾಣದೆ
ನಗುವ ತರುವ ಮೊಗದಿ

ನೀ ಕರೆಯದಿರು
ಎದೆಯ ಕೊರೆಯದಿರು
ದೇವನಿಲ್ಲ ಗುಡಿದೇಹದೊಳಗೆಂದು

ನೀನಾಗುವೆ ನಮ್ಮವರಿಗೆ
ಆತನಿರುವ ಸಂವೇದನೆಯು
ಈ ನಿಜವರಿಯೆನೇನು
ಸಂಕಟ ತಾ ನಮಗಿರದೆ
ಕಲ್ಲುಗೋಡೆಗಳಿಗೇನಾಯ್ತು
ನೀ ಬೊಬ್ಬಿಡಲು

ಬೆಳಂದಿಗಳು ಬೆಳಕಲ್ಲವೇ
ಆ ಕತ್ತಲೆಯೊಳು
ನಿನ್ನ ಹಿರಿ ತಲೆಮಾರು
ಬೆಳಗಿಲ್ಲವೇ ಮನೆಮನವನು
ಮತ್ಯಾಕೆ ಅಂಜಿಕೆಯು
ಈ ಮೂಢ ಮನದಲಿ

ನಾ ಓದದ ಪುಟಗಳ
ತಿರುವಿ ಭಯದೊಳು
ಬದುಕೆನ್ನಲಿ ಅವರು
ನಂಬಿದ ಜೀವನ ನಾನುಳಿಯೆ
ನನ್ನ ದೇವರು ಇವರೆ
ನಮಗೆ ನೆರವಾದವರು

- ಪೃಥ್ವಿರಾಜ್ ಗಂಗೋತ್ರಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ