KAVYASANCHAYA .......
ಶನಿವಾರ, ಜೂನ್ 4, 2016
ಉಸಿರಾಗು ಹಸಿರೆ
ಮರವಿದ್ದರೆ ಸಾಕಿತ್ತು
ಮನತುಂಬಲು ಉಸಿರು
ನೀರಿದ್ದರೆ ಬೇಕಿತ್ತು
ಬಯಲಿಗೆ ಹಸಿರು
ಹೊಳೆವ ಮಣ್ಣಿಗೆ
ಸುರಿವ ಗಂಗೆಯ
ತಂಪು ಕಣ್ಣಿಗೆ
ದುಡಿವ ರೈತಂಗೆ
ಸೋಮವಾರ, ಜನವರಿ 25, 2016
ಕರ್ತನ ಕಾರಣವ
ಕಾಣಲರಿಯದವಂಗೆ
ಕೈಗಿಟ್ಟ ಮುಕುಟವ
ಬಿಟ್ಟು ಮುಖವಾಡದಂತಿಪುದು
ಹನಿಯುತ್ತಿಹ
ಮೈಯ ತಣಿಸುತ್ತಿಹ
ನೀರ ಬಿಂದುಗಳೆಲ್ಲಿ
ಹುಡುಕಿ ಕೊಡಬಲ್ಲುದೇನು
ಜಾರಿ ಹೋದ ಖುಷಿಯನು
ಹನಿಗವಿತೆ
ಕವಿತೆ ಕಟ್ಟುವ ಕಾಯಕವ
ತೆರೆದಿಟ್ಟವರಾರಿಲ್ಲಿ
ಮೊಗೆದು ಬಗೆದು
ಪೋಣಿಪರಿಲ್ಲಿ
ಜಂಗಮರ ವಚನ
ಮಂಟಪದಂತಿರುವಂತೆ
ಹನಿಗವಿತೆ
ಬಾನೆತ್ತರದಿಂದ ದುಮ್ಮಿಕ್ಕುತ್ತುವೆ
ಗಗನ ಚುಕ್ಕಿಯೂ ಅಲ್ಲ
ಮಿಂಚು ಸಿಡಿಲುಗಳಲ್ಲ
ಅಮ್ಮ ತೆರೆದಿಟ್ಟ ಬದುಕ ಪುಟಗಳು
ಮಡಿಚಿ ಇಟ್ಟವನಿಗೆ
ಸಾಲ ಪಾಠಗಳು
ನವೀನ ಪೋಸ್ಟ್ಗಳು
ಹಳೆಯ ಪೋಸ್ಟ್ಗಳು
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)