ಸೋಮವಾರ, ಏಪ್ರಿಲ್ 13, 2020

ನರನಾಡಿಯೆಲ್ಲ 
ಸ್ವಾರ್ಥದ
ವಿಷವಿರಲು
ನಿನ್ನ ಬಿಡುವರೆ ತಾಯಿ
ಹಣಕ್ಕಾಗಿ 
ಮಾರುವರು
ಕಟ್ಟಿರುವವರು
ನಾವಾದರು
ಕೇಳುವರಾರು
ಪಕ್ಷಪಾತಿಗಳೆಲ್ಲ
ಕೊಳಕಾಗಿಹರು
ಮುಟ್ಟಿದರೆ ಶಾಪ
ನಮ್ಮ ತಟ್ಟ ಬಹುದೇನೊ
ಪಶ್ಚಿಮದ ಕಾಡನ್ನು
ಬೆಟ್ಟ ಗುಡ್ಡವನು
ಕೊರೆದರೂ ಅಗೆದರೊ
ಮಾರಿ ತಿಂದರೊ
ತೀರದ ದಾಹವದು
ಮತ್ತೆ ಮತ್ತೆ 
ನಿನ್ನ ಹಸಿರ ಸೆರಗನು
ಎಳೆಯುತಿಹರು
ನಿನ್ನವರು ಅವರಲ್ಲ
ಸತ್ತಿರುವವರು
ಮೌನಕ್ಕೆ ಜಾರಿದವರು
ಆರ್ಭಟಿಸುವವರಿಗೆ
ತಾಯಿ ಜಲವಾದರೇನು
ಮಣ್ಣಾದರೇನು
ಮರಗಿಡ 
ಪ್ರಾಣಿಪಕ್ಷಿಯಾದರೇನು
ಕಣ್ಣಿಗೆ ಮಣ್ಣೆರಚಿ
ಅಧಿಕಾರ ಪಡೆದು
ಮತ್ತೆ ಸುಳಿಯುವವರೇ
ಸುಳಿಗೆ ಮಾಡುವವರೇ
ನಿನ್ನ ಹೆಸರುಗಳ
ಬಾಡಿಗೆ ಪಡೆದವರು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ