ನೀನಾಡುವ ಆಟವೇ ಚೆಂದ
ನಿನ್ನ ಮನೆಯಂಗಳದಿ
ನೋವ ಮರೆಸಿ
ಸುಖವ ಮೆರೆಸುವೆ
ಚಂದಿರನ ತುಂಡು
ನಿನ್ನ ಕಿರುನಗೆಯಲ್ಲಿ
ಹೆತ್ತೊಡಲ ಸಂಭ್ರಮ
ಕಡಲ ತೆರೆಯಂತಿಹುದು
ಬಾಲ್ಯದೊಳು ನಿನಗರಿವಿಲ್ಲದೆ
ನೀ ಕೃಷ್ಣನಾದೆ
ಲಾಭ ಹೆಣೆಯುವ
ಕೊಳಕು ಮನಸಿದು
ಹೇಳದೆ ಬರುವ
ಕಂಬನಿಯ ಧಾರೆಯಲಿ
ತೊಳೆದು ಬಿಡೆನ್ನೆನನು..
ಕೆಟ್ಟ ಬುದ್ಧಿಯ
ಅಶುದ್ಧ ಪ್ರಜ್ಞೆಯಿದು
ಗಂಗೆಯಂತಿಹ ಮಾತಿನ
ನಿರ್ಮಲ ಹೃದಯದಿ
ಜೊತೆಯಾಗಿಸು
ಬದಲಾಗು ಬದಲಾಗಿಸು
ಪ್ರೀತಿ ಕಳೆದು ಅಳೆವ
ಕಠೋರವಾಗದಿರು
ಮರೆಯಾಗಬಹುದು
ಈ ಜೀವ ನೋಡುತ್ತ
ಸಹಿಸಲಾಗದೆ ಕಳೆಯಲಾಗದೆ