ವಿಚಾರಧಾರೆಯ ಸುತ್ತಲಲ್ಲಿ
ನನ್ನ ನೆರಳೇ ಕತ್ತಲಲ್ಲಿ
ಯಾರೋ ಕೇಳರು
ಯಾರೋ ನೋಡರು
ನನ್ನ ಜೀವನ ಸಂಧ್ಯವ
ನನ್ನ ಜೀವನ ಪಂದ್ಯವ ....
ವ್ಯರ್ಥ ಮಾಡದೆ ಬದುಕ
ಅರ್ಥವಾಗದೆ ಕಂದಕ
ಈ ಆಚಾರದ ನಾಲಗೆಯಲ್ಲಿ
ನೂರು ಮಾತಿನ ಹಲಗೆಯಲ್ಲಿ
ಕಟ್ಟಿ ಬಿಡು ಬಂಧನ
ದೂರಗೊಳಿಸು ಈ ಆಕ್ರಂದನ....
ಬಲದ ಮರದಿ ಎಡದ ಫಸಲು
ಎರಡು ಮರದಲಿ ಒಂದೇ ಸವಾಲು
ಸತ್ಯ ನಿತ್ಯವು ಮಂಥನ
ಮಿತ್ಯ ತೆಗೆಯುವ ಚಿಂತನ
ಅಪ್ಪಿ ಬಿಡು ಕಂದನ
ಜ್ಞಾನ ಜ್ಯೋತಿಯ ಆಲಿಂಗನ ...





