ಸೋಮವಾರ, ಏಪ್ರಿಲ್ 13, 2020

ಊರದಾರಿಯ ನಡುವೆ
ಮನುಜ ಮನವಿರಲು
ತನುವ ಕಾಪಿಡಲು
ನಾನಾಗಲಾರೆನು ಶುದ್ಧನು..
ತಳಿರು ತೋರಣವನ್ನ
ಕಟ್ಟಿದಾ ಮನೆಯ
ಮುಟ್ಟದೆ ನೋಡದೆ
ಊಹಿಸಲಾರೆ ಶುಭವನು..

ಎಲ್ಲ ದೇವರ ಒಳಗಿಟ್ಟು
ಹೊರ ಅಂದವನು ನನಗಿಟ್ಟು
ಮುಟ್ಟದಿರೆಂದು ಭೋದಿಸೆ
ನಾ ಮುಟ್ಟದಿರಲಾರೆನು
ನನಗಿಂತ ಕೆಳತಳವನು...

ಬೆನ್ನ ತಟ್ಟಿದವರೆಲ್ಲ 
ಬೆಲ್ಲ ತಮಗೆಂದು ತಿಂದರೆ
ಮಾಡಿದವನು ನಾನೆಂದು
ಬಾಣಲೆ ಕರಿಯ 
ತೊಳೆವವನಾಗಲಾರೆನು...

ಕಾಲನಿಗ್ರಹಿಸಿ ಹೊಳಪು
ಹೊಳೆದಿವುದೆನ್ನಯ ಬುದ್ಧಿ 
ಮತ್ತೆ ದೂಡಲು ನಾನು
ಕಾದ ಸೀಸದ ತುಂಡು
ಕಾನೂನಿನ ಪುಸ್ತಕವು...

ಸ್ವೀಕರಿಸಿ ಸ್ವಾಗತಿಸು
ಸ್ವಾತಂತ್ರ್ಯದ ನೆರಳು
ನಾನಾಗುತಿಹೆನೆಂದು
ನನ್ನತನದ ಹೆಮ್ಮೆಯಿದೆ
ಈ ಮನುಜ ಕುಲಕೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ