ಮಂಗಳವಾರ, ನವೆಂಬರ್ 13, 2012

ಸ್ವಾಭಿಮಾನ

 
     ಸಮ್ಮಾನ ಅವಮಾನದ 
     ಕಲ್ಮಶವ ಹುದುಗಿಟ್ಟ 
     ಕಸದ ತೊಟ್ಟಿಯಾಗಿಸಿದೆ 
     ಈ ಮನವನು 
     ಅಂತರ್ಯದ ಸತ್ಯವನು 
     ಬಹಿರಂಗ ಬಿಚ್ಚಿಡದೆ 
     ಮುಚ್ಚಿರದ ಎದೆಯಲ್ಲಿ 
     ಕಂಡೆ ಸ್ವಾಭಿಮಾನವನು 

ಬುಧವಾರ, ಅಕ್ಟೋಬರ್ 10, 2012

                ಜಾತಿ - ಪ್ರೀತಿ 

 

ಜಾತಿಗಿಂತ ಜಾಸ್ತಿ ದಿಗಿಲು 
ನೀತಿಗಿಂತ ಮಾತೆ ಮುಗಿಲು 
ಒಲವ ಒಡೆವ ಹಾದಿಯಲ್ಲಿ 
ನೆಲವ ತುಂಬಾ ರಕ್ತವ ಚೆಲ್ಲಿ 
ಕಟ್ಟುತಿಹರು ದ್ವೇಷದ ಗೋಪುರ
ಒಳಗೆ ಕುಣಿ'ಯುವ' ಹೃದಯದ ನೂಪುರ 

ನಮ್ಮ ಕನಕ

ಕನಕನಿಲ್ಲದ ಕಡೆ
ಭಾಷೆಯಾಕೆ ಧರ್ಮವೇಕೆ
ದೇಶಯಾಕೆ ಕರ್ಮವೇಕೆ
ಬದುಕು ನಿಲ್ಲುವೆಡೆ
ಅವನಲ್ಲದೆ ಮತ್ಯಾರು
ಜಿವನಕರ್ಥ ಕೊಟ್ಟಾರು..
                            ಭೋಗ ಮೆರೆವಲ್ಲಿ
                            ಭಕ್ತಿ ಸುದೆಯಿರಲು
                            ಇದಕ್ಕಿಂತ ಮರುಲೇನು
                            ಎಂದೆನ್ನುವನು ನಮ್ಮ ಕನಕ
                             ತ್ಯಾಗ ಮರೆಯಲ್ಲಿ
                             ನಗುತ ಬದುಕಿರಲು
                             ಅದಕ್ಕಿಂತ ತಿರುಲೇನು
                             ಎಂದೆನ್ನುವನು ನಮ್ಮ ಕನಕ
ಎಡವಿ ಬಿದ್ದವನ
ಮೇಲಕ್ಕೆತ್ತಿ
ನಡೆಯಗೊಡದವನ
ಪಕ್ಕಕ್ಕೆತ್ತಿ
ದಾರಿಸುಗಮವಗೊಳಿಸಿ
ನಡೆಮುಂದೆ 
ಎಂದೆನ್ನುವನು ನಮ್ಮ ಕನಕ..
                               ವ್ಯಕ್ತಿ ಆತ್ಮದೊಳಗೆ
                               ಭಕ್ತಿಯ ನಂಬಿ
                               ಶಕ್ತ ಸಮಾಜದೊಳಗೆ
                               ಶಕ್ತಿಯ ತುಂಬಿ
                               ನಿಜದೃಷ್ಟಿಯಲಿ ನೋಡು
                               ಎಂದೆನ್ನುವನು ನಮ್ಮ ಕನಕ

ಗುರುವಾರ, ಸೆಪ್ಟೆಂಬರ್ 13, 2012

ಭುವನೇಂದ್ರ ಕಾಲೇಜ್ ...

  

ಎಡದಲ್ಲಿ ವ್ಯಾಸರು ಬಲದಲ್ಲಿ ಸರಸ್ವತಿ
ಮಧ್ಯೆ T. M.A PAI 
ನಮಸ್ಕರಿಸಿ ಒಳಗೋಗೆಂದ ಸರ್ವಜ್ಞ

ಕೆಳಗಡೆ ವಿಜ್ಞಾನ ಮೇಲ್ಗಡೆ ಮಾನವೀಯ 
ನಡುವೆ ಪ್ರಿನ್ಸಿಪಾಲ್
ನೋಡಿ ಮಾತಾಡಿ ಹೋಗೆಂದ ಸರ್ವಜ್ಞ

ಮೊದಲವಧಿ ಸಂವಿಧಾನ ಮೂರನೆಯದು ವಿಜ್ಞಾನ
ನಡುವೆ ಯಾರಿಲ್ಲ
ನಡೆ ಹೋಗು ಕಂಠದಾನ ಮಾಡೆಂದ ಸರ್ವಜ್ಞ


ಭುವನೇಂದ್ರ ಕಾಲೇಜಿನಲ್ಲಿ ಮೇಡಂ  ಒಬ್ಬರು ತನ್ನ 2ನೇ ಕ್ಲಾಸ್ ನ  ಮಗಳಿಗೆ Grand Mother Day ಗೆ ಒಂದು ಸಾಂಗ್ ಇದ್ರೆ ಹೇಳಿಕೊಡಿ ಸರ್ ಅಂದ್ರು
  ತಕ್ಷಣ ಹೇಳ್ಬಿಟ್ಟೆ .....
           ಅಮ್ಮ ಅಮ್ಮ ಅಮ್ಮಮ್ಮ
           ನನ್ನ ಅಜ್ಜಿ ನಿನ್ನಮ್ಮ
           ಹಲ್ಲು ಹುಜ್ಜಿ ಸ್ನಾನವ ಮಾಡಿಸಿ
           ಬಟ್ಟೆಯ ತೊಡಿಸಿ ಊಟವ ಬಡಿಸಿ
           ಮುತ್ತನು ನೀಡಿ ನನ್ನನು ಹರಸಿ
           ಶಾಲೆಗೆ ನಿತ್ಯ ದಾರಿಯ ತೋರಿಸಿ 
           ಪ್ರೀತಿಯ ಪಾಠ ಕಲಿಸುವಲಮ್ಮ....
      
           ಕೈಯನು ಒತ್ತಿ ದೇಹವ ಮುಟ್ಟಿ
           ಜ್ವರವನು ತಿಳಿದು ಮದ್ದನು ಬಳಿದು
           ಸಾವಿರ ಕತೆಯನು ಕ್ಷಣದಲಿ ಹಣೆದು
           ಧಂ ಧುಂ ಅಂತ ಖುಷಿಯಲಿ ಕುಣಿದು
           ನನ್ನ ಕೋಪವ ತಣಿಸುವಳು
           ಒಲವಿನ ಬೆಸುಗೆಯ ಬೆಸೆಯುವಳು.....

ಶುಕ್ರವಾರ, ಮೇ 18, 2012

ಭೌದ್ಧಿಕ ವೈರುಧ್ಯದೊಳಗೊಂದು ಬದುಕು ...

ವಿಚಾರಧಾರೆಯ ಸುತ್ತಲಲ್ಲಿ 
ನನ್ನ ನೆರಳೇ ಕತ್ತಲಲ್ಲಿ 
ಯಾರೋ ಕೇಳರು 
ಯಾರೋ ನೋಡರು 
ನನ್ನ ಜೀವನ ಸಂಧ್ಯವ 
ನನ್ನ ಜೀವನ ಪಂದ್ಯವ ....

ವ್ಯರ್ಥ ಮಾಡದೆ ಬದುಕ 
ಅರ್ಥವಾಗದೆ ಕಂದಕ 
ಈ ಆಚಾರದ ನಾಲಗೆಯಲ್ಲಿ 
ನೂರು ಮಾತಿನ ಹಲಗೆಯಲ್ಲಿ 
ಕಟ್ಟಿ ಬಿಡು ಬಂಧನ 
ದೂರಗೊಳಿಸು ಈ ಆಕ್ರಂದನ....

ಬಲದ ಮರದಿ ಎಡದ ಫಸಲು 
ಎರಡು ಮರದಲಿ ಒಂದೇ ಸವಾಲು 
ಸತ್ಯ ನಿತ್ಯವು  ಮಂಥನ 
ಮಿತ್ಯ ತೆಗೆಯುವ ಚಿಂತನ 
ಅಪ್ಪಿ ಬಿಡು ಕಂದನ 
ಜ್ಞಾನ ಜ್ಯೋತಿಯ ಆಲಿಂಗನ ...

ಮಂಗಳವಾರ, ಮೇ 15, 2012

ವಸಂತ ಕಾಲ

ವಸಂತ ಕಾಲದಿ ರವಿ ಉದಯಿಸುವನು 
ಮೂಡಣ ದಿಕ್ಕಿನಲಿ 
ಮಲ್ಲಿಗೆ ಹೂಗಳು ಬಿಮ್ಮನೆ ಅರಳಿವೆ 
ನಮ್ಮಯ ತೋಟದಲಿ
ತೋರಿಹ ಮಂಜಿನ ಹನಿಗಳು 
ಮಾಡಿವೆ ಎಲೆಗಳ ಬಲು ಅಂದ 
ಬೀರಿರೆ ಪರಿಮಳ ಬಂಧವು
ದುಂಬಿಗಳಿಗೆಲ್ಲ ಆನಂದ....

ಕೋಗಿಲೆ ಸಂಕುಲ ಗಾನವ ಪಾಡುತ 
ಶುಭವನು ಕೋರಿದವು 
ಗಿಳಿಗಳು ಒಂದೆಡೆ ಸೇರುತ
ನಲ್ಮೆಯ ಮಾತುಗಳಾಡಿದವು
ಕವಿಗಳು ಕಾಣದ ಸುಂದರ ದೃಶ್ಯವು 
ಕಣ್ಣಿಗೆ ಕಾಣಿಸಲು 
ಸವಿವರದಿ ಪೇಳಿದೆ 
ನಿಮ್ಮಯ ಮನವಗೆ ತಲುಪಿಸಲು....

ಮಾವಿನ ಮರಗಳ ಹಸಿರಿನ ಚಿಗುರು 
ತಂದಿದೆ ಹೊಸ ವರುಷ  
ಕೋವಿದ ಜನಗಳ ಬದುಕಿಗೆ  
ತುಂಬಲಿ ನಿತ್ಯವೂ ನಿಜ ಹರುಷ  
ನಿತ್ಯವಸಂತವು ಆಗುತ ಮೆರೆಯಲಿ 
ನಮ್ಮಯ ಈ ಬದುಕು 
ಸತ್ಯದ ಸಮರಸ ಶಾಂತಿಯ ಪ್ರೀತಿಯ  
ಭಾವದಿ ನೀ ಬದುಕು ....

( ಇದು 9th ತರಗತಿನಲ್ಲಿ   ನಾನು  ಬರೆದ  ಕವಿತೆ. ಆಗ  ನಮ್  ಕನ್ನಡ   ಮೇಸ್ಟ್ರು  ಸೀತಾರಾಮ್  ಭಟ್  ನನ್ನ   ಈ   ಕವಿತೆಯನ್ನು ತಿದ್ದಿ  ಸರಿಮಾಡಿ  ಪ್ರೋತ್ಸಾಹ   ಕೊಟ್ಟರು....   )












ಬುಧವಾರ, ಮಾರ್ಚ್ 7, 2012

ಭುವಿಯು- ದಾಹದ ಭುಗಿಲು

ನಿನ್ನೊಡಲ ಗರ್ಭದಲಿ ನಾನಿರಲು
ಸುಡುತಿರುವೆ ನಿನ್ನ
ಓ ತಾಯೇ  ಕ್ಷಮಿಸೆನ್ನನು
ಪಡೆವ ದಾಹದಲಿ
ಕನಕ ವೈಡೂರ್ಯ
ನಿನ್ನ ಸೀಳಿ ಹಸಿರ ಬಗೆದು 
ರತ್ನ ಮಂಚದಲಿ ಮಲಗಿಸೆನ್ನನು
 
ವಿಶ್ವ ಜಾಗೃತಿಯ ಹೆಣ್ಣಿನ ದ್ವನಿಯ ಪ್ರತಿಬಿಂಬ ಈ ದಿನ. ನನ್ನ ಎಲ್ಲ ಸ್ನೇಹಿತ ಹಾಗು ಹಿತೈಷಿ ಹೃದಯಗಳಿಗೆ ಮಹಿಳಾ ದಿನಾಚರಣೆಯ ಶುಭಾಶಯಗಳು. ಕರುಣೆ, ವಾತ್ಸಲ್ಯ, ಮಮತೆ, ಪ್ರೀತಿ, ಸ್ನೇಹ, ಬಂಧುತ್ವ ಇವು ಹೆಣ್ಣು ಮಾನವ ಜಗತ್ತಿಗೆ ತೆರೆದಿಟ್ಟ ಜೀವನ ಸತ್ಯಗಳು. ಈ ಔಧರ್ಯಗಳೇ ನೆನೆವುಗಳ ಸತ್ವಗಳು.... ಕೋಟಿ ಕೋಟಿ ಮಾತೃ ಹೃದಯಕ್ಕಿದೋ ಪ್ರೀತಿ ಪೂರ್ಣ ವಂದನೆಗಳು.....
by,
PRUTHVIRAJ GANGOTRI

ಮಂಗಳವಾರ, ಜನವರಿ 31, 2012

ಪ್ರಕೃತಿ ಕೃತಿಯಾಗು

ಬಟ್ಟೆ ಹಾಸೂ ತಂತಿಯ ಮೇಲೆ
ಇಬ್ಬನಿಯ ಸಾಲೋಲು
ಇಕ್ಕಿದವರಾರೋ...?
ಚಿಟ್ಟೆ ಕುಳಿತಿರಲು ಮೇಲೆ
ಹೂವ ಕೀಳಲು
ಹೇಳಿಕೊಟ್ಟವರಾರೋ..?

ವವಿಧ್ಯತೆಯಲಿ ವೈರುದ್ಯವನು
ತಂದು ಎಸೆದವನು
ನೀನಲ್ಲವೇ ಹೇಳು...   ?
ಮತ್ತೆ ಮತ್ತೆ ಆಸೆಯ ಭಾವ
ಇನ್ನೊಂದರ ಸೌಂದರ್ಯ
ಕಸಿಯೋ ಸ್ವಭಾವ ನಿನದಲ್ಲವೇ.....?


ಪ್ರಕೃತಿ ಕೃತಿಯಲಿ ಶ್ರುತಿಯಾಗು
ಮರ್ಕಟ ಮನವನು ಕೃಷಿ ಮಾಡು
ಮಾನವತ್ವತೆಯನು  ಸಾರು 

ಪ್ರೀತಿ ರಥವನ್ನು ನೀ ಸೇರು.....