ಮಂಗಳವಾರ, ಏಪ್ರಿಲ್ 21, 2020

ನೀನಿಟ್ಟ ಹೆಜ್ಜೆಗುರುತು ಮಾಯವಾಗದ ಚೆಲುವು
ಮಳೆಯ ಕೆಸರಲ್ಲವದು ನನ್ನೆದೆಯ ಒಲವು

ಮನದ ಕಾಮನೆಗಳ ಬದಿಗಿಟ್ಟು ಕಾಯುತಿಹೆನು
ನಿನಗಾಗಿ ಉಳಿದಿದೆ ಒಲವ ಆಕಾಂಕ್ಷೆಯೆಲ್ಲವು 

ಕದಲಿದ ಕಡಲನು ಅವಿಯಾಗಿಸೋ ರವಿಯಂತೆ
ಬಳಲಿದ ಒಡಲಿನ ದಾಹ ನೀಗಿಸುವಂತೆ ನಿನ್ನ ಬರವು

ಸಖಿ ರಾಧೆಯ ಕೃಷ್ಣ ಹಂಬಲಿಸುವಂತಿದೆ ನೋಡು
ತುಡಿಯುವ ಜೀವದೊಳಗೆ ನಿನ್ನ ಕಾಣುವ ಹಸಿವು

ಗೆಳತಿ ಒಬ್ಬಂಟಿ ಜೀವವಿದು ಒಂದೊಂದೆ ಹೆಕ್ಕುತ್ತಾ
ಅಕ್ಷಿಯೊಳಗೆ ತುಂಬುತಿವೆ ನಿನ್ನೊಂದಿಗೆ ಕಳೆದ ನೆನವು

- ಪೃಥ್ವಿರಾಜ್ ಜಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ