ನನ್ನ ಸಂಗತ ಸವಿಯಲು
ನಿನ್ನ ಮೌನವ ತಾಳೆನು...
ಕಡಲ ತೆರೆಯಿದು
ಒಡಲ ಕರೆಯಿದು
ಬೆರಳು ಬೆರಳಿಗೆ ಚುಂಬನ
ನಿನ್ನ ಕೊರಳಲಿ ಬಂಧನ..
ತುಂಬಿಕೊಂಡಿವೆ ದಾಹವು
ಉಬ್ಬುತಗ್ಗುಗಳೆರಡು ದೇಹವು
ಒಂದೆ ಪ್ರೀತಿಯ ಪಥವಿದು
ನಮ್ಮ ಜೀವನ ರಥವಿದು..
ಬಾನಿನೆತ್ತರ ಹಾರೊ ಕನಸಿಗೆ
ಜೇನಿನತ್ತಿರ ಸುಳಿವ ಮನಸಿಗೆ
ಗೆಳತಿ ನಿನ್ನದೇ ರೂಪವೂ
ಬಾಳ ರಾತ್ರಿಯ ದೀಪವೂ..