ಶುಕ್ರವಾರ, ನವೆಂಬರ್ 25, 2011

ಪಿ .ಜಿ ಯ ನೆನಪು........


ವಿದ್ಯಾರ್ಥಿ ಸಂಘದ ಅಲವತ್ತು
ಚಿನ್ನಪ್ಪರಿಂದ ನಗುವಿಗೆ ಒತ್ತು
ಯಕ್ಷ ಕಲಾವೇದಿಕೆಯ ಸುತ್ತು
ಪ್ರೇಕ್ಷಕರ ನಗುವಿನ ಗಮ್ಮತ್ತು
                                        ಸಾರಿ ಸಾರಿ ಹೇಳುತ್ತಿದ್ದರು ಹನಿಗವಿ
                                        ಏನೋ ಇದೆ ಅದರೊಳಗೆ ಸವಿ ಸವಿ
                                        ಪ್ರಣಯ ಕವಿತೆಯೆಂದು ನಕ್ಕರೆ ಸಾಲದು
                                        ನಿಮಗಾಗಿ ನಾ ಕೊಡುವ ಸಾಲವದು
ಹಾಸ್ಯಲಾಸ್ಯದ ನಗೆ ಸಂಜೆಯಲಿ
ನಗುನಗುತಾ ನಲಿ ನಲಿ
ತುಂಬು ಮನದ ನಗೆಗಡಲಿನಲಿ
ನಗು ಸದಾ ತೇಲಿ ಬರಲಿ....

ಶುಕ್ರವಾರ, ನವೆಂಬರ್ 18, 2011

ಪ್ರ - ಬುದ್ಧನೆಲ್ಲಿ?.......



ಚಿನ್ನದಂತ ನಗುವಚೆಲ್ಲಿ
ಇಟ್ಟು ಗುರಿಯ ಹಾವ ಬಳ್ಳಿ
ಸುಟ್ಟು ಬಿಡುವ ಚೀನದಲ್ಲಿ
ಪ್ರಬುದ್ಧನಾದ ಬುದ್ಧನೆಲ್ಲಿ ...?
                             ಮತವಿರದ ತತ್ವದಲ್ಲಿ
                             ಪಥವಿರದ ವೇಗದಲ್ಲಿ
                             ವ್ಯತಿರಿಕ್ತ ನೆಲದಲ್ಲಿ
                             ಪ್ರಬುದ್ಧನಾದ ಬುದ್ಧನೆಲ್ಲಿ...?
ಶಾಂತಿ ಮರೆತ ನಾಯಕರಲ್ಲಿ
ಕ್ರಾಂತಿ ತುಂಬಿದ ಒಡಲಲ್ಲಿ
ಜಗವ ಗೆಲ್ಲುವ ತವಕದಲ್ಲಿ
ಪ್ರಬುದ್ಧನಾದ ಬುದ್ಧನೆಲ್ಲಿ...?
                            ಮತ್ತೆ ಇದೇ ಭಾರತದಲ್ಲಿ
                            ಶಾಂತಿದೂತನ ಮಣ್ಣಕಣದಲ್ಲಿ
                            ಹುಟ್ಟಿ ಬರಬಹುದೇ ದೀಕ್ಷೆಯಲ್ಲಿ
                            ಪ್ರಬುದ್ಧನಾದ ಬುದ್ಧನಲ್ಲಿ....!!!
                                                                     ನಿಮ್ಮ....
                                                                                     ರಾಜ್.......

ಗುರುವಾರ, ನವೆಂಬರ್ 17, 2011

ವಿಕೃತಿಯ.... ಸಂಸ್ಕೃತಿಯ..?





ರಾಮ ರಾಮ ರಾಮ ರಾಮ ರಾಮ....
ತುಟಿಯ ತುದಿಯಲಿ
ಗರ್ಭ ಗುಡಿಯಲಿ
ನಿತ್ಯ ಜಪದಲಿ ಸೀತಾರಾಮ...

ರಾಜಸಭೆಯಲಿ ಎಲ್ಲ ಹೋಮ

'ಕುಣಿಸಿರೆ ಬಾಲೆಯ
ಕೆತ್ತಿರೆ ಭಂಗಿಯ
ತೀರೆ ಸವಿಯಿರಿ ಕಣ್ಣಕಾಮ'

ಕವಿಗಲೆಂಬರ  ಕಾವ್ಯನಾಮ
'ರಾಜ ಪುರುಷನೆ
ಮುರಳಿ ರಸಿಕನೆ
ಬಲಿರೆ ಬಲಿರೆ ರಾಜಧಾಮ..'

ವಿಪ್ರರೆಂಬರು ' ಹೇ.. ಮಾ..
ಧನ್ಯ ಧನ್ಯ ! ರಾಜಧರ್ಮ
ಕಾಣಿರಿಲ್ಲಿ ಕುಲದ ಮರ್ಮ
ಉಳಿದು ಬೆಳೆಯಲಿ ಸಮಾಜನೇಮ'


ಮೂರ್ಖ ಸಂಗಡದಲ್ಲಿ ಕಾಮ
ಮನದಿ ಮನುಮಥ
ಹೊರಗೆ ಮನುಮತ
ಎಳೆದು ಬಿಟ್ಟರು ಪಂಗನಾಮ ....!!!

ರಾಷ್ಟ್ರ ಪ್ರೇಮ

ಉದಿಸಿತಂದು ರಾಷ್ಟ್ರಪ್ರೇಮ
ತಲ್ಲಿಬಿಟ್ಟರು ಎಲ್ಲ ಕಾಮ
ಹುಟ್ಟಿಕೊಂಡಿತು ಕ್ರಾಂತಿಧಾಮ
ಬಿಟ್ಟು ಬಿಟ್ಟರು ವೇದ ಸಾಮ..
                                     ಅಖಂಡವೇ ನಮ್ಮ ಸೀಮಾ
                                     ಎಳೆದು ಬಿಟ್ಟರು ಭರತ ನಾಮ
                                     ಸಟೆದು ನಿಂತ ಮೈಯ ರೋಮ
                                     ದಾಸ್ಯವೆಲ್ಲ ಹೋಮ ಹೋಮ....
ಕೂಗಿ ಕರೆದರೂ "ಹೇ.. ಮ.."
ಕೇಳಿಬಿಟ್ಟರು ಯಾವುದು ಸಮ
ದೂರಸರಿದರು ರಜತಮ
ತಂದು ಸಾರಿದರು  ಸ್ವರಾಜ್ಯವೇ ಧರ್ಮ...

ಮುಂಗಡ ಪತ್ರ...

ಹಿಂದೆ ಫೆಬ್ರುವರಿ ಹದಿನಾಲ್ಕಕ್ಕೆ
ಬರೆದಿದ್ದೆ ಪ್ರೇಮಪತ್ರ...
ಆಗ ಹೇಳಿದಳು ಪ್ರೀತಿ ಬದಲು
ನನಗೇನು ಕೇಳೆನು ನಿಮ್ಮತ್ರ...
ಈಗ ಬರೆಯುವಳು ತಿಂಗಳ
ಹದಿನಾಲ್ಕು ಬಾರಿ........
ಮುಂಗಡಪತ್ರ.....

ಚುನಾವಣೆ....

ಹೃದಯ ಬಾಗಿಲ ತೆರೆದು
ಪಕ್ಷ ಜ್ಯೋತಿಯ ಬೆಳಗಿ
ಮುದದಿಂದ ಭಜಿಸೋ
ನನ್ನ ನಾಮವ..
ಹೇ...ಮತದಾರ...
ನನ್ನ ನಾಮವ....

ಪ್ರೇಮಪತ್ರ

ನಾನವಳಿಗೆ ಬರೆದೆನು ಪ್ರೇಮಪತ್ರ
ಗೆಳಯನಿಗೆ ಹೇಳಿದೆ ತಲುಪಿಸು ಮಿತ್ರ
ಕೇಳಿದೆ ಮರುದಿನ ಏನಿದೆ ಉತ್ತ್ರ
ಅವನೆಂದ... ಮಿತ್ರ ಅವಳಾದಳು ನನಗತ್ರ...!

ಬಸ್ಸು

ಬಂದಿತು ಬಂದಿತು ನಮ್ಮೂರಿಗೆ ಬಸ್ಸು
ಬಸ್ಸಲ್ಲಿ ಕಾಲೇಜು ಹುಡುಗರದ್ದೇ ರಸ್ಸು
ನೋಡಬೇಕು ನೇತಾಡುವ ಅವರ ಗಮ್ಮತ್ತು
ಬಿದ್ದರೆ ಮಾತ್ರ ತಲೆ ಒಡೆದು ಶರಬತ್ತು.....

ಹೆಸರು

ರಾಜಕಾರಣಿಯೊಬ್ಬರ
ಭಾಷಣದ ಒಸರು
ನಮ್ಮೆಲ್ಲರ ತೆರಿಗೆಯ
ಹಣದಿ ಮಾಡಿ ಸೂರು
ಹಾಕುವರು ನಾಮಫಲಕದಲ್ಲಿ
ತಮ್ಮೆಸರು...

ರಾಜಕಾರಣಿ

ನಿಂತಾಗ ಹೇಳುವರು ನಾನೊಬ್ಬ ಪಕ್ಕ
ಗೆದ್ದಾಗ ಮಾಡುವರು ಕೈತುಂಬಾ ರೊಕ್ಕ
ಕೇಳಿದರೆ ನುಡಿವರು ಬಾಯಿ ತುಂಬಾ ಸೊಕ್ಕ
ಹೊಂದಿಸುವರು ಪಟ್ಟಿ ಸಾಲದ ಬಜೆಟಿಗೆ ತಕ್ಕ
ಬಿದ್ದಾಗ  ಮಾಡುವರು ಕೂಡಿಟ್ಟ ಹಣದ ಲೆಕ್ಕ......

ನುಡಿಸಿರಿ

ಸದ್ಯದಲ್ಲೇ ನುಡಿಸಿರಿಯ ೩ ದಿನಗಳ ಅನುಭವ ಕವನದ ರೂಪದಲ್ಲಿ ವ್ಯಕ್ತಪಡಿಸಬೇಕೆಂದಿದ್ದೇನೆ... ಸ್ನೇಹಿತರೆ...

ಬುಧವಾರ, ಸೆಪ್ಟೆಂಬರ್ 21, 2011

jai ho............

aviratha shramadali

atiratha kramadali

naada muktiya

kandevu....

dharma neladali

karma holadali

satya phasalanu beledevu...

jotege..

mannu tindevu

kallu tindevu

deshavanne tindevu

daksha karya maretevu

kayya teredevu

hanada kattu tumbikondevu.......

banni.. banni......

pramanikateya samadi mele

sullannu kattiruva brastara....

hanadahigalagi

janara satayiso

brastara....

mele rashtra patake haarisona...

annana horatada yavvanakke hoovugalagona...

.....jai hind....

.........vande mataram......

ಸೋಮವಾರ, ಸೆಪ್ಟೆಂಬರ್ 12, 2011

ತಂತಿ ಮೀಟಿದ ವೀಣೆ......

ತಂತಿ ಮೀಟಿದ ವೀಣೆಯು
ಒಂಟಿಯಾಗಿದೆ ಇಂದು....
ಬೆರಳು ತಾಕಿದ  ಜಾಣ್ಮೆಯು
ಬಂಧಿಯಾಗಿತ್ತೆ ಅಂದು....
ನೆನಪ ಪದದೊಳು....
ಮೌನ ರಾಗದ....
ಇಂಪ ತುಂಬಿದೆ ನನ್ನೊಳು....

ಭಾವ ಬೇಕೆನಲು ಕವಿತೆಯು...
ಹೃದಯ ಸಾಕೆನಲು ಒರತೆಯು....
ಕಣ್ಣ ತುಂಬಿದೆ ಆ ಮಧುರ ಕ್ಷಣಗಳು...
ನಿನ್ನ ಮುಂದಿದೆ ಈ ಸುಂದರ ದಿನಗಳು...

ಮರೆತು ಹೋದ ಜೀವದಲ್ಲಿ.....
ನೋವು ಸಾಗರದಾಗರ...ಇಲ್ಲಿ ...
ಮತ್ತೆ ಹೊಮ್ಮದೇ ರಾಗವು...
ನಮ್ಮ ಬದುಕಿನ ದೀಪವು....

ಬದಲಾವಣೆಯ ಗಾಳಿ ಬೀಸಲಿ....



ಬದಲಾಗು ಮನವೇ....
ಈ ಹೊಸ ಮುಖವಾಡದೊಳು
ಕೃಷಿಯಾಗು ಬದುಕೇ...
ಈ ಬತ್ತಿದ ಅನುಭವದೊಳು
ಒಲವಿಲ್ಲದ ಮನದೊಳು
ಎಣ್ಣೆ ಸುರಿದ ದೇಹದಂತೆ
ಕಡುವೈರಿ ನಾನಗುವೆನೇಕೆ
ನಿನ್ನ ಚರಿತೆಯೊಳು...

ಹಸಿದಾಗ ಅಮ್ಮನ ನೆನಪು ಸಹಜ....
ಬಯಕೆಯೋಳು ಅಪ್ಪನ ನೆನಪು ನಿಜ
ನಿನ್ನ ನೋವು ನಲಿವೊಳು..
ಹೆಜ್ಜೆಗೆಜ್ಜೆಗೆ ನೆರಳಾಗಿ ಬರುತಿರೋ
ಆ.....ದಾರಿಯ ಧೈರ್ಯ ತುಂಬಿರೋ
ನೆನಪ ಮರೆಯದೆ.....ಸಾಗು..
 ಬಹುದೂರ ಹೋಗು.....
 ಈ ಕಾಲಚಕ್ರದೊಳು.... ಭಾವನೆ ಹೊತ್ತೊಯ್ಯುವ
 ಹೊಸ ವ್ಯಕ್ತಿಯಾಗು.....

ಮಂಗಳವಾರ, ಜುಲೈ 26, 2011

ಚಿಗುರು ಕೆಂಗರುಳು

ನಿತ್ಯ ಸಂಜೆಯ ಕೆಂಪು ಹಾದಿಗೆ
ಅಪ್ಪ ನೀಡಿದ ಕೆಲಸ ಕಿಟ್ಟಿಗೆ

ಮದ್ಯಕ್ಕಾಗಿ ದೂರದ ಬೀದಿಗೆ
ಹೋಗುತಿದ್ದನು ದಿನವು ನೆಟ್ಟಗೆ

                                          ಪ್ರೀತಿಯವ್ವಗೆ ದಿನವು ಬಡಿಯೆ
                                          ದುರುಳ ಪಪ್ಪನ ಮರುಳ ಛಾಯೆ
                                          ಕುದಿಯುತ್ತಿತ್ತು ಕರುಳಕುಡಿಯೆ
                                          ಕಣ್ಣ ತುಂಬಲು ಇರುಳ ಮಾಯೆ

ಅವ್ವ ದುಡಿದ ಪ್ರತಿಯರೊಕ್ಕ
ಸೇರುತ್ತಿತ್ತು ಕುಡುಕನ ಪಕ್ಕ
ಕೂಳ ಎಸೆಯುವ ಅವನ ಸೊಕ್ಕ
ಮುರಿಯಲೋಲ್ಲರು ಅಕ್ಕಪಕ್ಕ

                                         ಯಾರೋ ಬರೆದರೂ ತೀರ್ಥರೂಪ
                                         ತಿಳಿಯದೇನು ಅವನ ಪಾಪ
                                         ವೈನ್ ತೀರ್ಥಕೆ ಹಲವು ರೂಪ
                                         ತಾಯ ಬದುಕು ಮೃತ್ಯುಕೂಪ


ನಿಮ್ಮವನು....,
ರಾಜ್..............

ಮಂಗಳವಾರ, ಮೇ 10, 2011

ಗೆಳತಿ....

taale gariya naadolu.....
ratna varniya bidireyali...
jaina kashiya gudiyaolu..
serisa barade nannanu.....
gelati..
manvantaragalu kaledaru..
manassu matra onde...
kanassu kuda onde
hrudaya bhavaneyu onde..
nanu neenu...matra bere bere...
ninna bala putadolu
nooraru nenapa bittiyu..
teredu swikarisu e manavanu
sneha sudeya e tanuvanu....

ಮಂಗಳವಾರ, ಏಪ್ರಿಲ್ 26, 2011

ಗೆಳತಿ......

ಓ ನೇಸರ
ಯಾಕೆ ಬೇಸರ?
ಭುವಿಗೆ ಬೆಳಕ ಚೆಲ್ಲೋ
ನೀನೇ ತಾನೇ ಗಗನಭಾಸ್ಕರ....
ಜಗವೇ ಸುತ್ತಿ ನಿನ್ನ ಸುತ್ತ
ಇರುಳ ಕಳೆದು ನಲಿವ ತುಂಬಿ
ಚೆಲುವ ಸುರಿವೆ ನಮಗೋಸ್ಕರ...
ಕನಸ ಕಾಣೋ
ಮನಸ ಪ್ರೀತಿಯಂತೆ
ಸ್ನೇಹದೊಲವ ತುಂಬೋ
ನನ್ನ ಮಮತೆಯಂತೆ
ನೀನೇ ಸುಂದರ.....
ಜಗದ ನೋವು ಅಲ್ಲೇ ಇರಲಿ
ಯುಗವು ಕಾವ್ಯ ಬರೆಯುತಿರಲಿ
ನಿತ್ಯ ನಲಿವು ತುಂಬುತಿರಲಿ
ಬಾ ಮರಳಿ ಖುಷಿಯ ತಾ
ಮನಸ ತುಂಬಾ ನಗುವ ತಾ
ಹೃದಯದೊಳಗೆ ನಿನ್ನ ಸಿಂಗರಿಸಿ
ಕಾಯುವೆನು ಸದಾ ನಾ...
by,
raj......


ಸುಮ್ಮನಿಸದಿರು ಮನಸೇ
ನಾ ಮರೆಯಾದರು ಅದು ಕ್ಷಣಿಕ....
ಮಾತು ಕಳೆದಾಗ
ನೋವು ವ್ಯಥೆಯಾಗಿ
ಕಥೆಯಾಗಿ ರೂಪುಗೊಳುವುದೇ ಜೀವನ....
ನನಗರಿವಿರೆ ಗೆಳತಿ
ನೀ ಬೇರೆ... ನಾ ಬೇರೆ ದಾರಿಯ ಹೂವುಚಿತ್ತಗಳು...
ನಾ ಎಷ್ಟು ಕಾದರು
ಆ ನಿನ್ನ ಮನಸು ನಿಲುವುದೇ ಸುಮ್ಮನೆ
ಹುಡುಕ ಬಯಸಿರೆ ಒಲವನು....
ನಿನ್ನ ಪಯಣದ ಹಾದಿಗೆ
ನನ್ನ ಪನ್ನೀರ ಸಿಂಚನ....
ಬಸವಲಿಯದಿರು ಕೊಡುವೆ ನೆರಳಿನ ಆಸರೆ.....
ನಿನ್ನ ಮೌನಕೆ ನಾ ಹಾಡುವೆ ಸ್ವರಗಳ....
ನನ್ನ ಜೊತೆಯಲೇ ದಶ ದಿಕ್ಕಿಗೆ
ಸಪ್ತ ರಾಗವು ಹೊಮ್ಮಿ ಬರಲಿ ನಿನ್ನೊಳು....
by,
nin preetiya snehita........

ಕಡಲ ತಡಿಯ ಮರಳ ಮೇಲೆ
ಭುವಿಯ ನೋಡಿ ನಗುವವನು ನಾನು ...
ಒಡಲ ಗುಡಿಯು ಮರುಳ ಶಾಲೆ
ಕಾವ್ಯ ಹೊತ್ತು ಬರುವವನು ನಾನು.....
ಸಿಡಿಲ ಕಾಂತಿಯ ತುಂಬಿದ ಮಳೆ
ಸವಿಯ ಬೇಕು ಬಾರೆ ನೀನು.....
ಮಡಿಲ ಮೇಲೆ ಮಲಗುವೆ ನಲ್ಲೆ
ಶಿರವ ಸವರಿ ಮುದ್ದಿಸೆ ನೀನು.....
ಗೆಳತಿ ,
ಮುಂಗಾರು ಹಿಂಗಾರು ಏನೇ ಬರಲಿ...
ಸದಾ ಇರುವೆ ಪ್ರೀತಿ ತುಂಬಿ ನಿನ್ನ ಜೊತೆಯಲಿ.......
by,
raj...
KANNADA POEM
varniya rathavanu yeleyona baaraa...
kavikavya chatravanittu
rajatumbida a jaina kashiyolu..
gelati baa bidisona chittaara....
rajatama kamava bisuta
a digambarana naguvinolu......
by,
raj.....

ಗೆಳತಿ.....

ಪ್ರತಿವರುಷ ಮಳೆಯೊಳಗೆ ನೆನಪ
ತರುವವನು ಯಾರು?
ಹನಿಯೊಳಗೆ ಬೆಳ್ಳಿಯ ಗೆರೆಯನು
ಎಳೆದವನು ಯಾರು?
ಅದ ನೋಡಿ ನಮ್ಮೊಳು
ಪ್ರೀತಿ ತುಂಬೋನು ಯಾರು ?
ಗೆಳತಿ ನೀ ಹೇಳಬಲ್ಲೆಯ
ಈ ಸತ್ಯವನು..?

ಹಾಡು ಯಾರೂ ಇಲ್ಲದ ವೇಳೆ
ಕುಣಿದಾಡು ನೀನೋಬ್ಬಲಿರೆ
ಹನಿ ಹನಿಯು ಮಾತಾಗಲಿ
ಮಳೆ ಹನಿಯೇ ಹೂವಾಗಲಿ

ನಿನ ಹೆಜ್ಜೆಯ ಗೆಜ್ಜೆಯಲಿ
ಧರಿತ್ರಿಯೇ ಸಂಭ್ರಮಿಸಲು
ಮನತುಂಬಿ ಹರುಷದಲಿ
ನಗುತಿರು ಈ ಸಿಂಚನದೊಳಗೆ...........
Thank you for cool rain.......