ನಿತ್ಯ ಸಂಜೆಯ ಕೆಂಪು ಹಾದಿಗೆ
ಅಪ್ಪ ನೀಡಿದ ಕೆಲಸ ಕಿಟ್ಟಿಗೆ
ಮದ್ಯಕ್ಕಾಗಿ ದೂರದ ಬೀದಿಗೆ
ಹೋಗುತಿದ್ದನು ದಿನವು ನೆಟ್ಟಗೆ
ಪ್ರೀತಿಯವ್ವಗೆ ದಿನವು ಬಡಿಯೆ
ದುರುಳ ಪಪ್ಪನ ಮರುಳ ಛಾಯೆ
ಕುದಿಯುತ್ತಿತ್ತು ಕರುಳಕುಡಿಯೆ
ಕಣ್ಣ ತುಂಬಲು ಇರುಳ ಮಾಯೆ
ಅವ್ವ ದುಡಿದ ಪ್ರತಿಯರೊಕ್ಕ
ಸೇರುತ್ತಿತ್ತು ಕುಡುಕನ ಪಕ್ಕ
ಕೂಳ ಎಸೆಯುವ ಅವನ ಸೊಕ್ಕ
ಮುರಿಯಲೋಲ್ಲರು ಅಕ್ಕಪಕ್ಕ
ಯಾರೋ ಬರೆದರೂ ತೀರ್ಥರೂಪ
ತಿಳಿಯದೇನು ಅವನ ಪಾಪ
ವೈನ್ ತೀರ್ಥಕೆ ಹಲವು ರೂಪ
ತಾಯ ಬದುಕು ಮೃತ್ಯುಕೂಪ
ನಿಮ್ಮವನು....,
ರಾಜ್..............
ಅಪ್ಪ ನೀಡಿದ ಕೆಲಸ ಕಿಟ್ಟಿಗೆ
ಮದ್ಯಕ್ಕಾಗಿ ದೂರದ ಬೀದಿಗೆ
ಹೋಗುತಿದ್ದನು ದಿನವು ನೆಟ್ಟಗೆ
ಪ್ರೀತಿಯವ್ವಗೆ ದಿನವು ಬಡಿಯೆ
ದುರುಳ ಪಪ್ಪನ ಮರುಳ ಛಾಯೆ
ಕುದಿಯುತ್ತಿತ್ತು ಕರುಳಕುಡಿಯೆ
ಕಣ್ಣ ತುಂಬಲು ಇರುಳ ಮಾಯೆ
ಅವ್ವ ದುಡಿದ ಪ್ರತಿಯರೊಕ್ಕ
ಸೇರುತ್ತಿತ್ತು ಕುಡುಕನ ಪಕ್ಕ
ಕೂಳ ಎಸೆಯುವ ಅವನ ಸೊಕ್ಕ
ಮುರಿಯಲೋಲ್ಲರು ಅಕ್ಕಪಕ್ಕ
ಯಾರೋ ಬರೆದರೂ ತೀರ್ಥರೂಪ
ತಿಳಿಯದೇನು ಅವನ ಪಾಪ
ವೈನ್ ತೀರ್ಥಕೆ ಹಲವು ರೂಪ
ತಾಯ ಬದುಕು ಮೃತ್ಯುಕೂಪ
ನಿಮ್ಮವನು....,
ರಾಜ್..............