ಮರೆಯಲಾಗದ ಗುರು ನರಹಳ್ಳಿಯವರು
ಮೇರುಗಿರಿಯ ಉತ್ತುಂಗದಲಿ
ಒಂದಂಶ ಬಯಲು
ಇನ್ನೊಂದಂಶ ಕವಲು
ಮತ್ತೂ ಹುಡುಕಿದರೆ
ಬಿಳಿ-ತಿಳಿ ಮಣ್ಣು ಕಲ್ಲು
ಮರಗಿಡ ಸಾಲು ಸಾಲು
ವಿಮರ್ಶೆಯ ಮಧ್ಯೆ
ಸಾಗುವ ದಾರಿಯಲ್ಲಿ
ಬದುಕಿನ ವ್ಯವಸಾಯದಲ್ಲಿ
ಪ್ರೀತಿ ಕಟ್ಟಿಕೊಂಡ
ಕನ್ನಡ ಮನಸ್ಸು
ಇತ್ತ ಪೂರ್ವವೋ ಅಲ್ಲ
ಅತ್ತ ಪಶ್ಚಿಮದ ಸುಳಿವಿಲ್ಲ
ಮಧ್ಯೆ ಏಕಾಂತದಲ್ಲಿ
ಪ್ರೀತಿ, ವಾತ್ಸಲ್ಯದ ಬದುಕಲ್ಲಿ
ಕಟ್ಟಿದ ಕನಸುಗಳೆಷ್ಟೋ
ಬೆಳೆಸಿದ ಮನಸುಗಳೆಷ್ಟೋ
ನಿಮ್ಮ ಅನುಭಾವದ ಮಾತು
ನಮ್ಮ ಭಾವನೆಗಳ ಹಿಂದೆ
ಸ್ಪೂರ್ತಿಯ ಬೇರನ್ನಿತ್ತು
ಅದೆಷ್ಟೋ ಮನಸುಗಳ ಅರಳಿಸಿವೆ
ಭೋಧನೆಯ ನೆನಪುಗಳು
ಇನ್ನೂ ಜೀವಂತ ಕುಸುಮ
ನನ್ನ ಬದುಕಿನ ಅಂತರಂಗದಲಿ...

