ನನ್ನ ಹಡೆದ ನೋವ ದನಿಯು
ನಿನ್ನ ಕನಸ ಖುಷಿಯ ಗಣಿಯು
ಹೇಳಳಾರದೆ ತಾಳಲಾರದೆ
ಕಹಿಯ ನುಂಗಿರಲಾರದೆ
ಬಾಳ್ವ ಪರಿಯನು ನೆಚ್ಚಿದೆ
ಒಲುಮೆ ಕುಡಿಯಲಿ ಹೆಚ್ಚಿದೆ
ನಗುವ ನೋಡುವ ತವಕವು
ಮಗುವ ಮುದ್ದಿಸೋ ಪುಳಕವು
ಸರಿತಪ್ಪುಗಳೇನೆ ಇರಲಿ
ಜಗವೇ ಕಂದನಿಗಾಗಿರಲಿ
ಬೆಳೆದ ಗಿಡದಲಿ ತುಂಬಿ ಫಸಲು
ತಾಯಿ ತ್ಯಾಗವು ತಡೆದು ಬಿಸಿಲು
ಓ ಮಾತೃ ಹೃದಯವ ನೀಡಿದೆ
ನನಗೆ ಜೀವದಾನವ ಮಾಡಿದೆ