ಭಾನುವಾರ, ಅಕ್ಟೋಬರ್ 30, 2022

ಹೆಣ್ಣು ಮಾಡಿದರೆ ತಪ್ಪು.. ಗಂಡು ಮಾಡಿದರೆ ತಪ್ಪಲ್ಲ.. ಭಲೇ ರಾಜಕೀಯ 
ಧನ್ಯೋಶ್ಮಿ ಭಾರತಾಂಬೆ
ತಾಯಿ ಭಾರತೀಯ ಪಾದ ಪದ್ಮಗಳ ಯಾವ ಕೈಯಲ್ಲಿ ಪೂಜಿಸುತ್ತೀರಿ..
ಅಣ್ಣ ಅಂತೆ ಅಣ್ಣ.. ಸಮರ್ಥಕರ ಏನನ್ನಬೇಕೋ ಶಿವ ಶಿವಾ.. ! 

ಅಮೃತವನು ಉಣಬಡಿಸುವ
ಮುಳುಗೇಳುತಿರುವ ಭರವಸೆಗಳಲಿ
ವಿಷಕಾಲಸರ್ಪವನು ಮಥಿಸುತ್ತಿರೆ
ವಿಷಜಂತುಗಳಂತೆ ವರ್ತಿಸುತಿಹರಿವರು
ಇವರ್ಯಾವ ಸೀಮೆ ನಾಯಕರು

ಅರಿಷಡ್ವರ್ಗವನು ಹದಗೊಳಿಸದವ
ಸಂಘ ನಾಮವ ಹಣದಿಂ ಕೊಂಬನೆ
ಕಾಮಕ್ಕಾಗಿ ಬಳಸುವ ವಸ್ತು ಹೆಣ್ಣೆಂಬನೆ
ನಾಲಗೆಯ ಹರಿ ಬಿಡುವವನು ಮರೆತನೆ
ದುರ್ಗಾ ಕಾಳಿ ಪ್ರತಿ ಮನೆಯ ಕನಸದು
ಭವ್ಯ ಭಾರತದ ನಾರಿ ಶಕ್ತಿಯಿದು
ಪದೇ ಪದೇ ಎಡವಿಕೊಳ್ಳುತ್ತಾ
ಜನರ ಅಪನಂಬಿಕೆಗೊಳಿಸದಿರಣ್ಣ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ