ಭಾನುವಾರ, ಅಕ್ಟೋಬರ್ 30, 2022

ಶೈವ ಪರ್ವತಗಳ ನಡುವೆ

ಕಾಠಿಣ್ಯ ತಪೋನಿರತನವನು

ದೇವ ಮೆಚ್ಚಿಸಿ ತನ್ನಿಚ್ಚೆಗೊಳಪಟ್ಟು

ಅವನನ್ನೆ ಪಡೆದು ಅಸ್ತಿತ್ವವನು ಕಳೆದು 

ಭಕ್ತಿಶಕ್ತಿಯಲಿ ಲಿಂಗವನು ಪಿಡಿದು

ಶಿವಾತ್ಮವೆಂದೆನುತ ಗಹಗಹಿಸಿ ನಗುತ್ತಾ 

ಅಸುರಾಪುರಕ್ಕೆ ನೀಲಾ ವಾರಿಧಿಯ ಕಲಕುತ್ತ 

ಪಯಣಿಸಿದನಾ ರಾವಣೇಶ್ವರನು 


ಕೈಲಾಸದ ಬಿಳಿ ತಿಳಿಯಾದೊಡೆ

ಇಳಿದ ಗಂಗೆಯೂ ಸಮುದ್ರ ಸೇರಿದೊಡೆ

ಖಾಲಿ ಹಿಮಪರ್ವತಗಳಲ್ಲೇನಿದೆ

ಯುದ್ಧ ಅಸ್ತ್ರಗಳು ಫಲಿಸದು 

ಓಲೈಕೆ ತಂತ್ರವೊಂದೇ ಉಳಿದಿಹುದು 

ಲಿಂಗವನು ತಾ ಪಡೆಯಲು 

ಎಂದೆನುತಾ ಇಳಿದು ಬೆನ್ನ ಪಿಡಿದನು 

ಪಿತೃ ವ್ಯಾಮೋಹಿ ವಕ್ರದಂತನು


ಮೊನಾಚದ ಕಲ್ಲ ಶಿಖರಗಳು 

ಹಸಿರ ಕಾನನದ ಸೊಬಗು

ನಡುನಡುವೆ ಹರಿವ ಜಲವು

ನಿತ್ಯಕಾಯಕವ ಮುಗಿಸಿ

ಜಲಧಿಯೊಳ್ ಇಳಿದ ಅರುಣಾವರ್ಣನು

ಲoಖಾಧಿಪತಿ ತಾ ದ್ವಿಜನಾಗಿರಲು

ಅರ್ಕನಿಗೆ ಸಂಧ್ಯಾ ವಿದಾಯ ಹೇಳದಿರನೆ

ಅತ್ತಿತ್ತ ನೋಡುತ್ತಾ ಯೋಚಿಸ ತೊಡಗಿದ 

ಕೆಳಗಿಟ್ಟರೆ ತಪಾಸೆಲ್ಲಾ ನೆಲ ಸೇರುವುದು




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ