ಶುಕ್ರವಾರ, ಜುಲೈ 8, 2022


ಶಾಂತ ಜೀವದ ತೊರೆಯ 
ಕಲಕುವ ಕಲ್ಲು ನೀನಾಗಿಹೆನು
ನಿನ್ನ ತೊರೆದವುಗಳೆಲ್ಲ
ಮೆರೆಯುತಿವೆ ನೋಡು

ಸುಡುವಾಗ್ನಿ ಮಾತುಗಳ 
ಬಾಣ ಹೂಡಿದವರಾರೆನುತ
ಪದೇ ಪದೇ ಚಿಂತಿಸದೆ
ಹಿಂತಿರುಗಿ ನೋಡದಿರೆ

ವೈರವನು ಉಣಬಡಿಸುವ
ಮತತತ್ವಗಳಮಲೇರಿ
ಜೀವಾಗ್ನಿಯೊಳು ಬೆಂದು
ನಿನ್ನ ದೇಹ ನೆಲವನಯಪ್ಪುವುದು

ಒಂದೇ ಜನ್ಮವಿವುದೆನ್ನುತಾ
ಬಂಧು ಬಾಂಧವ್ಯ ಪಡೆದವನು
ನಡುದಾರಿಯಲಿ ಕೈ ಚೆಲ್ಲಿದಾ
ಎಂದೆನುತಾ ಕೊರಗಬಹುದೇನೋ..

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ