ಬದಲಾಗು ಮನವೇ....
ಈ ಹೊಸ ಮುಖವಾಡದೊಳು
ಕೃಷಿಯಾಗು ಬದುಕೇ...
ಈ ಬತ್ತಿದ ಅನುಭವದೊಳು
ಒಲವಿಲ್ಲದ ಮನದೊಳು
ಎಣ್ಣೆ ಸುರಿದ ದೇಹದಂತೆ
ಕಡುವೈರಿ ನಾನಗುವೆನೇಕೆ
ನಿನ್ನ ಚರಿತೆಯೊಳು...
ಹಸಿದಾಗ ಅಮ್ಮನ ನೆನಪು ಸಹಜ....
ಬಯಕೆಯೋಳು ಅಪ್ಪನ ನೆನಪು ನಿಜ
ನಿನ್ನ ನೋವು ನಲಿವೊಳು..
ಹೆಜ್ಜೆಗೆಜ್ಜೆಗೆ ನೆರಳಾಗಿ ಬರುತಿರೋ
ಆ.....ದಾರಿಯ ಧೈರ್ಯ ತುಂಬಿರೋ
ನೆನಪ ಮರೆಯದೆ.....ಸಾಗು..
ಬಹುದೂರ ಹೋಗು.....
ಈ ಕಾಲಚಕ್ರದೊಳು.... ಭಾವನೆ ಹೊತ್ತೊಯ್ಯುವ
ಹೊಸ ವ್ಯಕ್ತಿಯಾಗು.....


ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ