ತಂತಿ ಮೀಟಿದ ವೀಣೆಯು
ಒಂಟಿಯಾಗಿದೆ ಇಂದು....
ಬೆರಳು ತಾಕಿದ ಜಾಣ್ಮೆಯು
ಬಂಧಿಯಾಗಿತ್ತೆ ಅಂದು....
ನೆನಪ ಪದದೊಳು....
ಮೌನ ರಾಗದ....
ಇಂಪ ತುಂಬಿದೆ ನನ್ನೊಳು....
ಭಾವ ಬೇಕೆನಲು ಕವಿತೆಯು...
ಹೃದಯ ಸಾಕೆನಲು ಒರತೆಯು....
ಕಣ್ಣ ತುಂಬಿದೆ ಆ ಮಧುರ ಕ್ಷಣಗಳು...
ನಿನ್ನ ಮುಂದಿದೆ ಈ ಸುಂದರ ದಿನಗಳು...
ಮರೆತು ಹೋದ ಜೀವದಲ್ಲಿ.....
ನೋವು ಸಾಗರದಾಗರ...ಇಲ್ಲಿ ...
ಮತ್ತೆ ಹೊಮ್ಮದೇ ರಾಗವು...
ನಮ್ಮ ಬದುಕಿನ ದೀಪವು....
ಒಂಟಿಯಾಗಿದೆ ಇಂದು....
ಬೆರಳು ತಾಕಿದ ಜಾಣ್ಮೆಯು
ಬಂಧಿಯಾಗಿತ್ತೆ ಅಂದು....
ನೆನಪ ಪದದೊಳು....
ಮೌನ ರಾಗದ....
ಇಂಪ ತುಂಬಿದೆ ನನ್ನೊಳು....
ಭಾವ ಬೇಕೆನಲು ಕವಿತೆಯು...
ಹೃದಯ ಸಾಕೆನಲು ಒರತೆಯು....
ಕಣ್ಣ ತುಂಬಿದೆ ಆ ಮಧುರ ಕ್ಷಣಗಳು...
ನಿನ್ನ ಮುಂದಿದೆ ಈ ಸುಂದರ ದಿನಗಳು...
ಮರೆತು ಹೋದ ಜೀವದಲ್ಲಿ.....
ನೋವು ಸಾಗರದಾಗರ...ಇಲ್ಲಿ ...
ಮತ್ತೆ ಹೊಮ್ಮದೇ ರಾಗವು...
ನಮ್ಮ ಬದುಕಿನ ದೀಪವು....
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ