ವಸಂತ ಕಾಲದಿ ರವಿ ಉದಯಿಸುವನು
ಮೂಡಣ ದಿಕ್ಕಿನಲಿ
ಮಲ್ಲಿಗೆ ಹೂಗಳು ಬಿಮ್ಮನೆ ಅರಳಿವೆ
ನಮ್ಮಯ ತೋಟದಲಿ
ತೋರಿಹ ಮಂಜಿನ ಹನಿಗಳು
ಮಾಡಿವೆ ಎಲೆಗಳ ಬಲು ಅಂದ
ಬೀರಿರೆ ಪರಿಮಳ ಬಂಧವು
ದುಂಬಿಗಳಿಗೆಲ್ಲ ಆನಂದ....
ಕೋಗಿಲೆ ಸಂಕುಲ ಗಾನವ ಪಾಡುತ
ಶುಭವನು ಕೋರಿದವು
ಗಿಳಿಗಳು ಒಂದೆಡೆ ಸೇರುತ
ನಲ್ಮೆಯ ಮಾತುಗಳಾಡಿದವು
ಕವಿಗಳು ಕಾಣದ ಸುಂದರ ದೃಶ್ಯವು
ಕಣ್ಣಿಗೆ ಕಾಣಿಸಲು
ಸವಿವರದಿ ಪೇಳಿದೆ
ನಿಮ್ಮಯ ಮನವಗೆ ತಲುಪಿಸಲು....
ಮಾವಿನ ಮರಗಳ ಹಸಿರಿನ ಚಿಗುರು
ತಂದಿದೆ ಹೊಸ ವರುಷ
ಕೋವಿದ ಜನಗಳ ಬದುಕಿಗೆ
ತುಂಬಲಿ ನಿತ್ಯವೂ ನಿಜ ಹರುಷ
ನಿತ್ಯವಸಂತವು ಆಗುತ ಮೆರೆಯಲಿ
ನಮ್ಮಯ ಈ ಬದುಕು
ಸತ್ಯದ ಸಮರಸ ಶಾಂತಿಯ ಪ್ರೀತಿಯ
ಭಾವದಿ ನೀ ಬದುಕು ....
( ಇದು 9th ತರಗತಿನಲ್ಲಿ ನಾನು ಬರೆದ ಕವಿತೆ. ಆಗ ನಮ್ ಕನ್ನಡ ಮೇಸ್ಟ್ರು ಸೀತಾರಾಮ್ ಭಟ್ ನನ್ನ ಈ ಕವಿತೆಯನ್ನು ತಿದ್ದಿ ಸರಿಮಾಡಿ ಪ್ರೋತ್ಸಾಹ ಕೊಟ್ಟರು.... )



ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ