ಮಂಗಳವಾರ, ಏಪ್ರಿಲ್ 26, 2011

ಗೆಳತಿ.....

ಪ್ರತಿವರುಷ ಮಳೆಯೊಳಗೆ ನೆನಪ
ತರುವವನು ಯಾರು?
ಹನಿಯೊಳಗೆ ಬೆಳ್ಳಿಯ ಗೆರೆಯನು
ಎಳೆದವನು ಯಾರು?
ಅದ ನೋಡಿ ನಮ್ಮೊಳು
ಪ್ರೀತಿ ತುಂಬೋನು ಯಾರು ?
ಗೆಳತಿ ನೀ ಹೇಳಬಲ್ಲೆಯ
ಈ ಸತ್ಯವನು..?

ಹಾಡು ಯಾರೂ ಇಲ್ಲದ ವೇಳೆ
ಕುಣಿದಾಡು ನೀನೋಬ್ಬಲಿರೆ
ಹನಿ ಹನಿಯು ಮಾತಾಗಲಿ
ಮಳೆ ಹನಿಯೇ ಹೂವಾಗಲಿ

ನಿನ ಹೆಜ್ಜೆಯ ಗೆಜ್ಜೆಯಲಿ
ಧರಿತ್ರಿಯೇ ಸಂಭ್ರಮಿಸಲು
ಮನತುಂಬಿ ಹರುಷದಲಿ
ನಗುತಿರು ಈ ಸಿಂಚನದೊಳಗೆ...........
Thank you for cool rain.......

2 ಕಾಮೆಂಟ್‌ಗಳು: